ವಿಧಾನಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಪಿಎ ವಿನಯ್ ಎನ್ನುವವರನ್ನು ಕೆಲ ದುರ್ಷ್ಕರ್ಮಿಗಳು ಅಪಹರಿಸಲು ಯತ್ನಿಸಿದ ಘಟನೆ ವರದಿಯಾಗಿದೆ. ಮನೆಯಲ್ಲಿದ್ದ ವಿನಯ್ ಅವರ ನಿವಾಸಕ್ಕೆ ಕಾರಿನಲ್ಲಿ ಆಗಮಿಸಿದ ಐದು ಮಂದಿ ಆರೋಪಿಗಳ ತಂಡ ಅವರನ್ನು ಒತ್ತಾಯಪೂರ್ವಕವಾಗಿ ಎಳೆದುಕೊಂಡು ಹೋಗಲು ಪ್ರಯತ್ನಿಸಿದೆ. ಆ ಸಂದರ್ಭದಲ್ಲಿ ವಿನಯ್ ಜೋರಾಗಿ ಕಿರುಚಿಕೊಂಡಿದ್ದಾರೆ. ವಿನಯ್ ಜೋರಾಗಿ ಕೂಗುತ್ತಿರುವುದನ್ನು ಕೇಳಿದ ನೆರೆಹೊರೆಯವರು, ಆರೋಪಿಗಳನ್ನು ಸುತ್ತುವರಿಯಲು ಪ್ರಯತ್ನಿಸಿದಾಗ ಲಾಂಗ್, ಮಚ್ಚುಗಳಿಂದ ಬೆದರಿಸಿ ಪರಾರಿಯಾಗಿದ್ದಾರೆ. ಆರೋಪಿಗಳು ಲಾಂಗ್