ಬಿಜೆಪಿಯಲ್ಲಿ ಭಿನ್ನಮತದ ಬಗ್ಗೆ ಪ್ರಶ್ನಿಸಿದ ಮಾಧ್ಯಮದವರ ಮೇಲೆ ಕಿಡಿಕಾರಿರುವ ವಿಧಾನ ಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಅವರು ಮಾಧ್ಯಮದವರಿಗೆ ಬೇರೆ ಕೆಲಸವಿಲ್ಲ. ಬೆಂಕಿ ಹಚ್ಚುವ ಕೆಲಸ ಮಾಡುತ್ತೀರಾ ಎಂದು ಗರಂ ಆಗಿ ಪ್ರತಿಕ್ರಿಯಿಸಿದ್ದಾರೆ. ಪರಿವರ್ತನಾ ಯಾತ್ರೆಯಲ್ಲಿ ಹೆಚ್ಚಾಗಿ ಕಾಣಿಸದ ಹಿನ್ನೆಲೆಯಲ್ಲಿ ಪಕ್ಷದಲ್ಲಿ ಭಿನ್ನಮತ ಇದೆಯೇ ಎಂದು ಮಾಧ್ಯಮದವರು ಕೇಳಿದ್ದಕ್ಕೆ ಗರಂ ಆದ ಈಶ್ವರಪ್ಪ ರಾಜಕಾರಣಿಗಳನ್ನು ಮಾಧ್ಯಮದವರು ಮೀರಿಸುತ್ತೀರಿ ಎಂದಿದ್ದಾರೆ. ಮನೆಯಲ್ಲಿ ಜಗಳ ನಡೆಯುವುದಿಲ್ಲವೇ? ಜಗಳ ಯಾಕೆ ಅಂತ ಕೇಳಿದ್ರೆ ಏನು