ಬೆಂಗಳೂರು: ನರೇಂದ್ರ ಮೋದಿ ಸೂರ್ಯ ಇದ್ದಂತೆ. ಕಾಂಗ್ರೆಸ್ ಕಚೇರಿಯಲ್ಲಿ ಕುಳಿತು ಉಗಿದ್ರೆ ಸೂರ್ಯನಿಗೆ ಉಗಿದಂತೆ. ಅದು ನಿಮ್ಮ ಮುಖಕ್ಕೆ ವಾಪಸ್ ಬೀಳುತ್ತೆ ಎಂದು ಕೆ.ಎಸ್.ಈಶ್ವರಪ್ಪ ತಿರುಗೇಟು ನೀಡಿದ್ದಾರೆ. ಪರಿವರ್ತನಾ ಯಾತ್ರೆ ಉದ್ದೇಶಿಸಿ ಮಾತನಾಡಿದ ಅವರು, ಪಾಕಿಸ್ತಾನದ ಉಗ್ರವಾದಿಗಳು ಭಾರತದ ಸೈನಿಕರ ತಲೆ ಕತ್ತರಿಸಿದರೆ, ಪ್ರಧಾನಿ ನರೇಂದ್ರ ಮೋದಿಯವರು ಪಾಕಿಸ್ತಾನಕ್ಕೆ ನುಗ್ಗಿ 2 ಸಾವಿರ ಸೈನಿಕರನ್ನು ನಿರ್ನಾನ ಮಾಡಿದ್ರು ಎಂದರು.ಮೋದಿಗೆ ನನ್ನ ಕಂಡರೆ ಭಯ ಎಂದು ಸಿದ್ದರಾಮಯ್ಯ ಹೇಳ್ತಾರೆ. ಸಿದ್ದರಾಮಯ್ಯ ಎಲ್ಲಿ?