ಧಾರ್ಮಿಕ ಕಾರ್ಯಕ್ರಮ ಪುರಾಣ, ಪ್ರವಚನಗಳಂಥಹ ಸಮಾರಂಭಗಳಲ್ಲಿ ಪ್ರಸಾದ ಇದ್ದೇ ಇರುತ್ತದೆ. ಆದರೆ ಅಂದು ಮಾಡಿದ ಪ್ರಸಾದ ಅವತ್ತೇ ಭಕ್ತಾಧಿಗಳಿಗೆ ವಿನಿಯೋಗಿಸುತ್ತಾರೆ. ಆದರೆ ಈ ಗ್ರಾಮದಲ್ಲಿ ಮಾತ್ರ ವಿಭಿನ್ನ. ಮಾಡಿದ ಪ್ರಸಾದವನ್ನು ಎರೆಡು ದಿನಗಳ ಹಾಗೆ ಇಟ್ಟು ಮೂರನೇ ದಿನಕ್ಕೆ ಅದನ್ನು ಹಂಚುತ್ತಾರೆ. ಈ ವಿಶಿಷ್ಠ ಪ್ರಸಾದ ವಿನಿಯೋಗ ಗದಗ ಜಿಲ್ಲೆ ಹಾಲಕೇರಿ ಸಮೀಪದ ಜಕ್ಕಲಿ ಗ್ರಾಮದಲ್ಲಿ ಕಂಡುಬರುತ್ತದೆ.ಜಕ್ಕಲಿ ಗ್ರಾಮದ ಅನ್ನದಾನೀಶ್ವರ ಮಠದಲ್ಲಿ ಎಡೆಯೂರು ಸಿದ್ಧಲಿಂಗೇಶ್ವರ ಪುರಾಣ ಏರ್ಪಡಿಸಲಾಗಿದೆ. ಇದರ ನಿಮಿತ್ಯ