ಬೆಂಗಳೂರು ಜೆ.ಸಿ. ರಸ್ತೆ ಮೇಲ್ಸೇತುವೆ ಅಂದಾಜು ವೆಚ್ಚ ₹50 ಕೋಟಿಯಷ್ಟು ಹೆಚ್ಚಾಗಿದ್ದು , 220 ಕೋಟಿಯಿಂದ 270 ಕೋಟಿಗೆ ತಲುಪಿದೆ. ತಾಂತ್ರಿಕ ಸಲಹಾ ಸಮಿತಿ (ಟಿಎಸಿ) ಸಭೆಯಲ್ಲಿ ಮಂಗಳವಾರ ಈ ಯೋಜನೆಯ ಅನುಮೋದನೆ ಬಗ್ಗೆ ಚರ್ಚೆ ನಡೆಯಲಿದೆ. ಮಿನರ್ವ ವೃತ್ತದಿಂದ ಟೌನ್ ಹಾಲ್ ಮೂಲಕ ಹಡ್ಸನ್ ವೃತ್ತದವರೆಗೆ ಏಳು ಜಂಕ್ಷನ್ಗಳಲ್ಲಿ ಸಿಗ್ನಲ್ ಮುಕ್ತ ಸಂಚಾರವನ್ನು ಈ ಮೇಲ್ಸೇತುವೆ ಒದಗಿಸಲಿದೆ. ಮುಖ್ಯಮಂತ್ರಿಯವರ ಅಮೃತ ನಗರೋತ್ಥಾನ ಯೋಜನೆಯಲ್ಲಿ ರಾಜ್ಯ ಸರ್ಕಾರ ₹220 ಕೋಟಿಯನ್ನು