ಅಂಬೇಡ್ಕರ್ ಜಯಂತಿಗೂ ಮೊದಲೇ ಸಂವಿಧಾನ ಶಿಲ್ಪಿಗೆ ಅವಮಾನ

ಕಲಬುರಗಿ, ಶುಕ್ರವಾರ, 12 ಏಪ್ರಿಲ್ 2019 (12:09 IST)

ದೇಶದಲ್ಲೆಡೆ ಶಿಲ್ಪಿಯ ಜಯಂತ್ಯುತ್ಸವಕ್ಕೆ ಭರ್ಜರಿ ಸಿದ್ಧತೆ ನಡೆಯುತ್ತಿದ್ದರೆ, ಮತ್ತೊಂದೆಡೆ ಮಹಾಚೇತನಕ್ಕೆ ಮಾಡಲಾಗಿದೆ.

ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಅವಮಾನ ಮಾಡಿರುವ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರ ವಿರುದ್ಧ ಕೇಸ್ ದಾಖಲಾಗಿದೆ.

ಅಂಬೇಡ್ಕರ್ ಜಯಂತ್ಯುತ್ಸವ ಹಿನ್ನೆಲೆಯಲ್ಲಿ ಕೆಲವು ವಾಟ್ಸಪ್ ಗ್ರುಪ್ ಗಳ ಡಿಪಿಗೆ ಅಂಬೇಡ್ಕರ್ ರ ಭಾವಚಿತ್ರವನ್ನು ಇಡಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಆರೋಪಿ ವಾಟ್ಸಪ್ ಡಿಪಿ ಇಟ್ಟಿರುವ ವ್ಯಕ್ತಿಯೊಂದಿಗೆ ಮಾತನಾಡಿ ಜಾತಿ ನಿಂದನೆ ಮಾಡಿದ್ದಾರೆ. ಅಷ್ಟೇ ಅಲ್ಲ ಸಂವಿಧಾನ ಶಿಲ್ಪಿಗೆ ಅಪಮಾನ ಮಾಡಿದ್ದಾರೆ.

ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ನಿಂಬರ್ಗಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮಲ್ಲಿಕಾರ್ಜುನ ಸುಭಾಷ ಮಾನೆ ಎಂಬಾತ ಸಂವಿಧಾನ ಹಾಗೂ ಅಂಬೇಡ್ಕರ್ ರಿಗೆ ಅಪಮಾನ ಆಗುವ ಹಾಗೆ ಮಾತನಾಡಿದ್ದಾರೆ. ಇದನ್ನು ಖಂಡಿಸಿ ಹಾಗೂ ಆರೋಪಿ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿ ಆಳಂದ ತಾಲೂಕಿನ ದಲಿತ ಸಂಘರ್ಷ ಸಮಿತಿ ಸಂಚಾಲಕ ಪ್ರಕಾಶ ಚಂದಪ್ಪಾ ಸರ್ವೋದಯ ಎಂಬುವರು ದೂರು ದಾಖಲಿಸಿದ್ದಾರೆ. ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಮದುವೆಗೂ ಮುನ್ನ ನಡೆಸಿದ ಲೈಂಗಿಕ ಕ್ರಿಯೆ ಗರ್ಭಾವಸ್ಥೆ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿವೆಯೇ?

ಬೆಂಗಳೂರು : ಪ್ರಶ್ನೆ: ನಾನು 27 ವರ್ಷದ ಮಹಿಳೆ. ನನ್ನ ಮದುವೆಗಿಂತ 7 ವರ್ಷಗಳ ಹಿಂದೆ ನಾನು ಹುಡುಗಿಯೊಬ್ಬಳ ...

news

ಹಸ್ತಮೈಥುನದಿಂದ ಕನ್ಯತ್ವ ಕಳೆದುಹೋಗುತ್ತದೆಯೇ?

ಬೆಂಗಳೂರು : ಪ್ರಶ್ನೆ: ನಾನು 19 ವರ್ಷದ ಯುವತಿ. ನನಗೆ ಹಸ್ತಮೈಥುನವೆಂದರೆ ಇಷ್ಟ. ಸಣ್ಣವಿದ್ದಾಗಿನಿಂದ ...

news

ಗೆಳತಿ ಸನಿಹವಿದ್ದಾಗ ನಿಯಂತ್ರಣ ಮಾಡಲು ಸಾಧ್ಯವಾಗುತ್ತಿಲ್ಲ. ಏನು ಮಾಡಲಿ?

ಬೆಂಗಳೂರು : ಪ್ರಶ್ನೆ: ನನಗೆ 25 ವರ್ಷ. ನನಗೆ ಉದ್ರೇಕವಾದಗೆಲ್ಲ ನನ್ನ ಪ್ರಿಯತಮೆಯನ್ನ ಭೇಟಿ ಮಾಡುತ್ತೇನೆ. ...

news

ಊಟಕ್ಕೆ ಗತಿಯಿಲ್ಲದೇ ಯುವಕರು ಸೇನೆ ಸೇರ್ತಾರೆ ಎಂಬ ಸಿಎಂ ಕುಮಾರಸ್ವಾಮಿ ವಿಡಿಯೋ ವೈರಲ್

ಬೆಂಗಳೂರು: ಒಪ್ಪೊತ್ತಿನ ಊಟಕ್ಕಾಗಿ ಜನ ಸೇನೆ ಸೇರುತ್ತಾರೆ ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದಾರೆನ್ನಲಾದ ...