ರಾಮನಗರ : ಜೆಡಿಎಸ್ ಪಕ್ಷ ಅಧಿಕಾರಕ್ಕೋಸ್ಕರ ಬಿಜೆಪಿ ಜೊತೆ ಹೋಗುತ್ತದೆ. ಜೆಡಿಎಸ್ಗೆ ಸಿದ್ಧಾಂತ, ವೈಚಾರಿಕತೆ ಇಲ್ಲ. ಅಧಿಕಾರಕ್ಕಾಗಿ ಯಾರ ಜೊತೆ ಬೇಕಾದರೂ ಹೋಗ್ತಾರೆ.ನನ್ನನ್ನು ರಾಷ್ಟ್ರಪತಿ, ಪಿಎಂ ಮಾಡ್ತಿನಿ ಅಂದ್ರೂ ನನ್ನ ಹೆಣವೂ ಕೂಡಾ ಬಿಜೆಪಿಗೆ ಹಾಗೂ ಆರ್ಎಸ್ಎಸ್ ಜೊತೆ ಹೋಗಲ್ಲ ಎಂದು ಬಿಜೆಪಿ ಹಾಗೂ ಜೆಡಿಎಸ್ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.ಮಾಗಡಿಯ ಶಾದಿಮಹಲ್ ಉದ್ಘಾಟನೆ ಮಾಡಿ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಿಜೆಪಿಯವ್ರು ನನ್ನನ್ನು ಹಿಂದೂ ವಿರೋಧಿ ಅಂತ ಬಿಂಬಿಸ್ತಾರೆ.