ಇಂದೂ ಕೂಡ ಮಂಗಳೂರು ಕಮಿಷನರೇಟ್ ನಲ್ಲಿ ಕರ್ಪ್ಯೂ ಮುಂದುವರಿಕೆ

ಮಂಗಳೂರು| pavithra| Last Modified ಶನಿವಾರ, 21 ಡಿಸೆಂಬರ್ 2019 (11:22 IST)
ಮಂಗಳೂರು : ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮಂಗಳೂರಿನಲ್ಲಿ ತೀವ್ರ ಪ್ರತಿಭಟನೆ ವ್ಯಕ್ತವಾಗುತ್ತಿರುವ ಹಿನ್ನಲೆಯಲ್ಲಿ ಇಂದೂ ಕೂಡ ಮಂಗಳೂರು ಕಮಿಷನರೇಟ್ ನಲ್ಲಿ ಕರ್ಪ್ಯೂ ಮುಂದುವರಿಕೆಯಾಗಿದೆ.ನಗರದ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸರ ನಿಯೋಜನೆ ಮಾಡಲಾಗಿದೆ. ಮಂಗಳೂರು ನಗರದಾದ್ಯಂತ ಎಲ್ಲಾ ಅಂಗಡಿಗಳು ಬಂದ್ ಮಾಡಲಾಗಿದ್ದು, ಇಡೀ ಮಂಗಳೂರು ಸ್ಥಬ್ತವಾಗಿದೆ ಎನ್ನಲಾಗಿದೆ.


ಇಂದು ಬೆಳಿಗ್ಗೆ 6ರಿಂದ 8ರವರೆಗೆ ಕರ್ಪ್ಯೂ ಸಡಿಲಿಕೆ ಮಾಡಲಾಗಿದ್ದು, ಅಗತ್ಯ ವಸ್ತುಗಳನ್ನು ಖರೀದಿಸಲು ಜನರು ಮುಗಿಬಿದ್ದಿದ್ದಾರೆ. ಹಾಗೇ ಡಿ.22 ರವರೆಗೂ ಕರ್ಪ್ಯೂ ಮುಂದುವರಿಯಲಿದೆ ಎಂದು ಪೊಲೀಸ್ ಆಯುಕ್ತ ಡಾ.ಹರ್ಷ ತಿಳಿಸಿದ್ದಾರೆ.

ಇದರಲ್ಲಿ ಇನ್ನಷ್ಟು ಓದಿ :