ಕೆಪಿಸಿಸಿ ಪದಾಧಿಕಾರಿಗಳ ನೇಮಕದಲ್ಲಿ ತಾರತಮ್ಯವಾಗಿದೆ ಎನ್ನುವ ವರದಿಗಳಿಗೆ ಪ್ರತಿಕ್ರಿಯೆ ನೀಡಿದ ಸಮಾಜ ಕಲ್ಯಾಣ ಖಾತೆ ಸಚಿವ ಎಚ್.ಅಂಜನೇಯ, ಫ್ರಂಟ್, ಬ್ಯಾಕ್, ರೈಟ್ ಲೆಫ್ಟ್ ಎಲ್ಲರಿಗೂ ಹುದ್ದೆ ದೊರೆತಿವೆ.ಯಾವುದೇ ಅಸಮಾಧಾನವಿಲ್ಲ ಎಂದು ಹೇಳಿದ್ದಾರೆ. ಹಿಂದುಳಿದ, ಎಡ, ಬಲ ಜಾತಿಗಳ ನಾಯಕರಿಗೆ ಪದಾಧಿಕಾರಿಗಳ ನೇಮಕದಲ್ಲಿ ಸ್ಥಾನ ದೊರೆತಿಲ್ಲ ಎನ್ನುವ ವರದಿಗಳನ್ನು ತಳ್ಳಿ ಹಾಕಿ ಪ್ರತಿಯೊಂದು ಸಮುದಾಯಕ್ಕೂ ಅವಕಾಶ ದೊರೆತಿದೆ. ಕೆಲವೊಂದು ಅಸಮಧಾನವಿದ್ದರೆ ಪಕ್ಷದ ಚೌಕಟ್ಟಿನಲ್ಲಿ ಸರಿಪಡಿಸಲಾಗುವುದು ಎಂದು ತಿಳಿಸಿದ್ದಾರೆ. ಕೆಪಿಸಿಸಿ