Widgets Magazine

ಕೋಟಿ ಕೋಟಿ ಬೆಲೆಬಾಳುವ ಕಾರುಗಳು, ವಾಚ್‌ಗಳ ಸರದಾರ ಕುಮಾರಸ್ವಾಮಿ : ಕಾಂಗ್ರೆಸ್ ತಿರುಗೇಟು

ಬೆಂಗಳೂರು| Rajesh patil| Last Updated: ಶನಿವಾರ, 20 ಫೆಬ್ರವರಿ 2016 (16:04 IST)
ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಕೋಟಿ ಕೋಟಿ ಬೆಲೆಬಾಳುವ ಕಾರುಗಳಿದ್ದು, ಅರ್ಧಕೋಟಿಗೂ ಹೆಚ್ಚಿನ ಬೆಲೆಬಾಳುವ ಕಾರುಗಳಿವೆ ಎಂದು ಕಾಂಗ್ರೆಸ್ ಮುಖಂಡ ಆರೋಪಿಸಿದ್ದಾರೆ.

ಸಮಾಜವಾದಿ ಹಿನ್ನೆಲೆಯುಳ್ಳ ಮುಖ್ಯಮಂತ್ರಿ 70 ಲಕ್ಷ ರೂಪಾಯಿ ಬೆಲೆಬಾಳುವ ವಾಚ್ ಕಟ್ಟಿದ್ದಾರೆ ಎಂದು ಕುಮಾರಸ್ವಾಮಿ
ಮಾಡಿದ ಆರೋಪಕ್ಕೆ ಕಾಂಗ್ರೆಸ್ ಮುಖಂಡರು ತಿರುಗೇಟು ನೀಡಿದ್ದಾರೆ.

ನಗರದಲ್ಲಿ ಇಂದು ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡ ಉಗ್ರಪ್ಪ, ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಹಲವು ಕಾರು ಮತ್ತು ವಾಚ್‌ಗಳನ್ನು ಉಡುಗೊರೆಯಾಗಿ ಪಡೆದಿದ್ದಾರೆ ಎಂದು ಆರೋಪಿಸಿದರು.

ಕುಮಾರಸ್ವಾಮಿ ತಮ್ಮ ಪುತ್ರ ನಿಖಿಲ್‌ಗಾಗಿ ಕೋಟ್ಯಾಂತರ ರೂಪಾಯಿ ಬೆಲೆಬಾಳುವ ಬೈಕ್‌ಗಳನ್ನು ಖರೀದಿಸಿದ್ದಾರೆ. ಕೋಟಿ ಕೋಟಿ ಬೆಲೆಬಾಳುವ ರೇಂಜ್‌ ರೋವರ್, ಇನ್ಫಿನಿಟಿ, ಲಂಬೋರ್ಗಿನಿ ಸೇರಿದಂತೆ ಹಲವು ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ ಎಂದು ತಿರುಗೇಟು ನೀಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ತಮಗೆ ದೊರೆತ ಎಲ್ಲಾ ಉಡುಗೊರೆಗಳನ್ನು ಹರಾಜಿಗಿಡಬೇಕು.ಅದನ್ನು ವೈಯಕ್ತಿಕ ಬಳಕೆ ಮಾಡುವುದು ಸರಿಯಲ್ಲವೆಂದು ಮನವಿ ಮಾಡಲಾಗುವುದು ಎಂದರು.

ಕುಮಾರಸ್ವಾಮಿ ಕೂಡಾ ತಮಗೆ ದೊರೆತ ಎಲ್ಲಾ ಉಡುಗೊರೆಗಳನ್ನು ಬಹಿರಂಗಪಡಿಸ್ತಾರಾ? ದುಬೈನಲ್ಲಿ 1.5 ಕೋಟಿ ರೂಪಾಯಿ ವಾಚ್ ಉಡುಗೊರೆಯಾಗಿ ಪಡೆದಿದ್ದಾರೆ. ಈ ಗಿಫ್ಟ್‌ಗಳನ್ನು ದುಬೈನಲ್ಲಿ ಅವರಿಗೆ ನೀಡಿದ್ದು ಯಾರು ಎಂದು ಪ್ರಶ್ನಿಸಿದರು.

ಮುಖ್ಯಮಂತ್ರಿಗಳು ಉಡುಗೊರೆ ತೆಗೆದುಕೊಳ್ಳುವುದು ಸಹಜ. ಆದರೆ, ಅದನ್ನು ನಾಡಿನ ಆಸ್ತಿಯಾಗಿಡಬೇಕು. ವೈಯಕ್ತಿಕ ಬಳಕೆಯಿಂದ ಮಾನ ಮರ್ಯಾದೆಗೆ ಧಕ್ಕೆಯಾಗುತ್ತದೆ ಎಂದು ಕಾಂಗ್ರೆಸ್ ಮುಖಂಡ ವಿ.ಎಸ್.ಉಗ್ರಪ್ಪ ಹೇಳಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :