ಹೈದರಾಬಾದ್ : ಕಿರುತೆರೆ ನಿರೂಪಕ ಪ್ರಣವ್ ಸಿಸ್ಟ್ಲ ಹೆಸರಿನಲ್ಲಿ ನಕಲಿ ಪ್ರೊಫೈಲ್ ಸೃಷ್ಟಿಸಿ ವ್ಯಕ್ತಿಯೊಬ್ಬ ಭೋಗಿರೆಡ್ಡಿ ತ್ರಿಶಾ ಎಂಬ ಯುವತಿಯೊಂದಿಗೆ ಚಾಟ್ ನಡೆಸುತ್ತಿದ್ದ. ಇದು ತಿಳಿದ ನಂತರ ತ್ರಿಶಾ ನಿರೂಪಕನನ್ನೇ ಅಪಹರಿಸಿ ಬಳಿಕ ಪೊಲೀಸರ ಅತಿಥಿಯಾಗಿದ್ದಾಳೆ.ಬಂಧಿತ ಯುವತಿ ಖ್ಯಾತ ಉದ್ಯಮಿಯಾಗಿದ್ದು ಐದು ಸ್ಟಾರ್ಟ್ ಅಪ್ ಕಂಪನಿಗಳ ಒಡತಿಯಾಗಿದ್ದಳು ಎಂದು ತಿಳಿದುಬಂದಿದೆ. ಕಿರುತೆರೆ ಆಂಕರ್ ಒಬ್ಬರನ್ನು ಹಿಂಬಾಲಿಸಿ ಅಪಹರಿಸಿದ ಆರೋಪದ ಮೇಲೆ ಮಹಿಳಾ ಉದ್ಯಮಿಯೊಬ್ಬಳನ್ನು ಬಂಧಿಸಿರುವ ಘಟನೆ ಹೈದರಾಬಾದ್ನಲ್ಲಿ ನಡೆದಿದೆ. ಕಿರುತೆರೆ