ಸಿಸಿಬಿ ಪೊಲೀಸ್ರು ಕೆಲವು ದಿನಗಳ ಹಿಂದೆ ಭೇದಿಸಿದ್ದ ನಕಲಿ ಮಾಕ್ಸ್ ಕಾರ್ಡ್ ದಂಧೆ ಆಳ ಅಗಲ ನೀರಿಕ್ಷೆಗೂ ಮೀರಿದೆ. ಸದ್ಯ ಕಿಂಗ್ ಪಿನ್ ನನ್ನ ಬಂಧಿಸಿರೋ ಸಿಸಿಬಿ ಟೀಂ ಎಲ್ಲ ಯೂನಿವರ್ಸಿಟಿಗಳಿಂದ ಮಾಹಿತಿ ಪಡೆಯಲು ವಿವಿ ಗಳಿಗೆ ನೋಟಿಸ್ ನೀಡಿದ್ದಾರೆ.ಸಿಲಿಕಾನ್ ಸಿಟಿಯಲ್ಲಿ ನಿರುದ್ಯೋಗಿ ಯುವಕರನ್ನ ಟಾರ್ಗೆಟ್ ಮಾಡಿ ನಕಲಿ ಸರ್ಟಿಫಿಕೇಟ್ ದಂಧೆ ನಡೆಸ್ತಿದ್ದ ಜಾಲವೊಂದ್ರ ಮೇಲೆ ಕಳೆದ ವಾರ ಹಿಂದೆ ಸಿಸಿಬಿ ಪೊಲೀಸ್ರು ದಾಳಿ ಮಾಡಿ ನಾಲ್ವರು ಆರೋಪಿಗಳನ್ನ ಬಂಧಿಸಿದ್ರು.