ಅಪರಾಧ ಜಗತ್ತಿಗೆ ಎಂಟ್ರಿ ಕೊಟ್ಟ ಪಾತಕಿಗಳು ತರಹೇವಾರಿ ಐಡಿಯಾಗಳನ್ನು ಬಳಸಿ ದಿಢೀರ್ ಶ್ರೀಮಂತರಾಗಬೇಕೆಂದು ಸ್ಕೆಚ್ ಹಾಕೋದು ಕಾಮನ್. ಆದರೆ ಅಂತಹ ಸ್ಕೇಚ್ ಹಾಕ್ತಿದ್ದ ಖದೀಮರನ್ನು ಹೆಡೆಮುರಿಕಟ್ಟಲಾಗಿದೆ. ನಕಲಿ ನಂಬರ್ ಪ್ಲೇಟ್ ಅಳವಡಿಸಿ ದರೋಡೆ ನಡೆಸಲು ಸಂಚು ರೂಪಿಸಿದ್ದ ಐವರು ಅಂತರ್ ರಾಜ್ಯ ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರಿಂದ ಮಾರಕಾಸ್ತ್ರಗಳನ್ನು ಉಳ್ಳಾಲ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕೇರಳದ ತ್ರಿಶ್ಯೂರ್ ನಿವಾಸಿಗಳಾದ ಸುಜಿತ್ ಜಿ. (23), ಮುಹಮ್ಮದ್ ಫಾಝಿಲ್ (25), ಮುಹಮ್ಮದ್ ಶರೀಫ್ (24), ಅನಸ್