ಬೆಂಗಳೂರು: ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಸ್ಯಾಂಡಲ್ ವುಡ್ ಖ್ಯಾತ ಗಾಯಕ ಎಲ್.ಎನ್.ಶಾಸ್ತ್ರಿ(46) ಕೊನೆಯುಸಿರೆಳೆದಿದ್ದಾರೆ.ಕರುಳು ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅವರು ಇಂದು ಮಧ್ಯಾಹ್ನ ನಿಧನರಾಗಿದ್ದಾರೆ. 1996ರಲ್ಲಿ `ಅಜಗಜಾಂತರ ಚಿತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು. ಇದುವರೆಗೆ 3 ಸಾವಿರಕ್ಕೂ ಹೆಚ್ಚು ಹಾಡುಗಳಿಗೆ ಎಲ್.ಎನ್.ಶಾಸ್ತ್ರಿಯವರು ಧನಿಯಾಗಿದ್ದರು.`ಜನುಮದ ಜೋಡಿ ಚಿತ್ರದ `ಕೋಲುಮಂಡೆ ಜಂಗಮದೇವ ಹಾಡಿಗೆ ರಾಜ್ಯ ಚಲನಚಿತ್ರ ಪ್ರಶಸ್ತಿ ಸಹ ಪಡೆದಿದ್ದರು. ಖ್ಯಾತ ಸಂಗೀತ ನಿರ್ದೇಶಕರಾದ ಹಂಸಲೇಖ, ವಿ.ಮನೋಹರ್ ರವರ ಜೊತೆ ಕೆಲಸ ಮಾಡಿದ್ದರು. 25ಕ್ಕೂ