ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಪ್ರಧಾನಿ ಮೋದಿಗೆ ಬಾಗಲಕೋಟೆಯ ರೈತನೊಬ್ಬ ತಮ್ಮ ಅಳಲನ್ನು ಟ್ವಿಟರ್ ಮೂಲಕ ತೋಡಿಕೊಂಡಿದ್ದಾರೆ.ದಿಡೀರ್ ಈರುಳ್ಳಿ ದರ ಕುಸಿತವಾಗಿರುವ ಹಿನ್ನಲೆಯಲ್ಲಿ ಬಾಗಲಕೋಟೆಯ ಬೆನಕಟ್ಟೆ ಗ್ರಾಮದ ರೈತ ಪ್ರಶಾಂತ್ ಎಂಬವರು ನೇರವಾಗಿ ಪ್ರಧಾನಿ ಮೋದಿಗೆ ಟ್ವೀಟ್ ಮಾಡಿ ಸಮಸ್ಯೆ ವಿವರಿಸಿದ್ದಾರೆ.ಈರುಳ್ಳಿ ದರ ಕುಸಿತದಿಂದಾಗಿ ನಮಗೆ ನಷ್ಟವಾಗಿದೆ ಎಂದು ಟ್ವೀಟ್ ಮಾಡಿದ್ದು, ಇದರಲ್ಲಿ ಈರುಳ್ಳಿ ಬೆಳೆಗೆ ಮಾಡಿದ ಖರ್ಚು, ಸಾರಿಗೆ ವೆಚ್ಚ, ಮಾರುಕಟ್ಟೆ ದರ ಸೇರಿದಂತೆ ವಿವರವಾಗಿ ಬರೆದಿದ್ದಾರೆ. ದಿಡೀರ್