ಮೈಸೂರು: ಸಾಹಸಸಿಂಹ ವಿಷ್ಣುವರ್ಧನ್ ಸ್ಮಾರಕ ಎಲ್ಲಿ ನಿರ್ಮಾಣವಾಗಬೇಕೆಂಬ ವಿಚಾರದಲ್ಲಿ ಗೊಂದಲಗಳು ಮುಂದುವರಿದ ಬೆನ್ನಲ್ಲೇ ಮೈಸೂರಿನಲ್ಲಿ ಈ ಹಿಂದೆ ಸರ್ಕಾರ ನೀಡಿದ್ದ ಜಮೀನಿನಲ್ಲಿ ಪೂಜೆ ಮಾಡಲು ಬಂದ ಅಭಿಮಾನಿಗಳಿಗೆ ರೈತ ಮಹಿಳೆಯೊಬ್ಬಳು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.ವಿಷ್ಣು ಅಭಿಮಾನಿಗಳ ಸಂಘ ವಿಷ್ಣು ಸೇನಾ ಸಮಿತಿ ಎಚ್ ಡಿ ಕೋಟೆ ರಸ್ತೆಯಲ್ಲಿ ಈ ಹಿಂದೆ ಸರ್ಕಾರ ನೀಡಿದ್ದ ಜಮೀನಿನಲ್ಲಿ ವಿಷ್ಣು ಬ್ಯಾನರ್ ಕಟ್ಟಿ ಪೂಜೆ ಮಾಡಿ ಸರ್ಕಾರದ ವಿಳಂಬ ನೀತಿ ವಿರುದ್ಧ ಪ್ರತಿಭಟನೆಗೆ