ರೈತರ ಸಾಲ ಮನ್ನಾ ಮಾಡುವುದು ಫ್ಯಾಶನ್ ಆಗಿ ಹೋಗಿದೆ ಎಂದು ಹೇಳಿಕೆ ನೀಡಿದ ಕೇಂದ್ರ ನಗರಾಭಿವೃದ್ಧಿ ಖಾತೆ ಸಚಿವ ಎಂ.ವೆಂಕಯ್ಯನಾಯ್ಡು ವಿರುದ್ಧ ರೈತ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಶಾಸಕ ಪುಟ್ಟಣ್ಣಯ್ಯ ನೇತೃತ್ವದಲ್ಲಿ ಅನೇಕ ರೈತ ಸಂಘಟನೆಗಳು ಇಂದು ನಗರದಲ್ಲಿ ಭಾರಿ ಪ್ರತಿಭಟನೆ ನಡೆಸಿ ಸಚಿವ ನಾಯ್ಡು ವಿರುದ್ಧ ಘೋಷಣೆಗಳನ್ನು ಕೂಗಿದರು. ಕಳೆದ ನಲವತ್ತು ವರ್ಷಗಳಿಂದ ಎಂದೂ ಬಾರದಂತಹ ಬರ ಬಂದು ರೈತರ ಆತ್ಮಹತ್ಯೆಗೆ ಶರಣಾಗುತ್ತಿದ್ದರೂ ಸಚಿವ ನಾಯ್ಡು