ಬೆಂಗಳೂರು : ಮಹಾರಾಷ್ಟ್ರಕ್ಕೆ ನೀರು ಹರಿಸುವೆ ಎಂದ ಸಿಎಂ ಯಡಿಯೂರಪ್ಪ ಹೇಳಿಕೆಗೆ ಮಹಾದಾಯಿ ಹೋರಾಟಗಾರರು, ರೈತರು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಹಾರಾಷ್ಟ್ರ ಚುನಾವಣೆ ಪ್ರಚಾರದ ವೇಳೆ ಸಿಎಂ ತುಬಚಿ-ಬಬಲೇಶ್ವರ ಏತ ನೀರಾವರಿ ಯೋಜನೆ ನೀರು ಹರಿಸುವ ಭರವಸೆ ನೀಡಿದ್ದಾರೆ. ಅವರ ಈ ಹೇಳಿಕೆ ಇದೀಗ ವಿವಾದ ಸೃಷ್ಟಿಸಿದ್ದು, ಬಿಎಸ್ ವೈ ಸಿಎಂ ಆಗಿರೋದು ಕರ್ನಾಟಕಕ್ಕೋ? ಇಲ್ಲಾ ಮಹಾರಾಷ್ಟ್ರಕ್ಕೋ? ಕರ್ನಾಟಕದಲ್ಲೇ ಕುಡಿಯಲು ನೀರಿಲ್ಲ, ಮಹಾರಾಷ್ಟ್ರಕ್ಕೆ ನೀರು ಹರಿಸ್ತಾರಂತೆ ಎಂದು ಹೋರಾಟಗಾರರು ಕಿಡಿಕಾರಿದ್ದಾರೆ.