ಬಯಲುಸೀಮೆಗೆ ಶಾಶ್ವತ ನೀರಾವರಿಗೆ ಆಗ್ರಹಿಸಿ ರೈತರು ಬೀದಿಗಿಳಿದಿದ್ದಾರೆ. ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರದಿಂದ ಬೈಕ್ ರ್ಯಾಲಿ ಮೂಲಕ ಬಂದಿರುವ ರೈತರು ರಾಣಿ ಸರ್ಕಲ್ ಬಳಿ ನೆರೆದು ಪ್ರತಿಭಟನೆ ನಡೆಸುತ್ತಿದ್ದಾರೆ. ಬೆಂಗಳೂರು ಪ್ರವೇಶಿಸದಂತೆ ರೈತರನ್ನ ಅಲ್ಲಿಯೇ ತಡೆಯಲು ಪೊಲೀಸರು ಯತ್ನಿಸುತ್ತಿದ್ದಾರೆ. ರಾಣಿ ಸರ್ಕಲ್`ನ ಸುತ್ತಿಲೂ ಪೊಲೀಸ್ ಸರ್ಪಗಾವಲು ಹಾಕಲಾಗಿದೆ. ಇತ್ತ, ಗೌರಿಬಿದನೂರು ಸುತ್ತಮುತ್ತಲಿನಿಂದಲೂ ಬಂದಿರುವ ರೈತರು ಚಿತ್ರಾವತಿ ಸಮೀಪ ನೆರೆದಿದ್ದು, ಬೈಕ್`ಗಳ ಮೂಲಕ ಬೆಂಗಳೂರು ಪ್ರವೇಶಿಸಿ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಸಜ್ಜಾಗಿದ್ದಾರೆ.ಹಲವು