ನಾಳೆ ಬೆಂಗಳೂರಲ್ಲಿ ರಸ್ತೆಗಿಳಿಯುವ ಮೊದಲು ಎಚ್ಚರ!

ಬೆಂಗಳೂರು| Krishnaveni K| Last Modified ಸೋಮವಾರ, 25 ಜನವರಿ 2021 (09:55 IST)
ಬೆಂಗಳೂರು: ಗಣರಾಜ್ಯೋತ್ಸವಕ್ಕೆ ಹೇಗೂ ರಜೆ ಇದೆಯಲ್ಲಾ ಎಂದು ನಾಳೆ ಏನಾದರೂ ಬೆಂಗಳೂರಿನಲ್ಲಿ ಸುತ್ತಾಡುವ ಯೋಜನೆ ಹಾಕಿಕೊಂಡಿದ್ದರೆ ಮುಂದೂಡುವುದು ಒಳ್ಳೆಯದು. ಯಾಕೆಂದರೆ ನಾಳೆ ರಾಜ್ಯ ರಾಜಧಾನಿಯಲ್ಲಿ ರೈತರ ಪ್ರತಿಭಟನೆಯ ಕಾವು ಜೋರಾಗಲಿದೆ.

 
ನಾಳೆ ಗಣರಾಜ್ಯೋತ್ಸವ ಭಾಷಣದ ಬಳಿಕ ರೈತರು ಸಾವಿರಾರು ಟ್ರ್ಯಾಕ್ಟರ್ ಗಳ ಪೆರೇಡ್ ನಡೆಸಲಿದ್ದಾರೆ ಎಂದು ರೈತ ನಾಯಕ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದ್ದಾರೆ. ನಾವು ಯಾವುದೇ ಸಾರ್ವಜನಿಕರಿಗೆ ತೊಂದರೆಯಾಗದ ರೀತಿಯಲ್ಲಿ ಶಾಂತಿಯುತ ಪ್ರತಿಭಟನೆ ನಡೆಸಲಿದ್ದೇವೆ ಎಂದು ಅವರು ಹೇಳಿದ್ದಾರೆ. ಹಾಗಿದ್ದರೂ ಸಾವಿರಾರು ಟ್ರ್ಯಾಕ್ಟರ್ ಗಳು ಒಮ್ಮೆಲೇ ರಸ್ತೆಗಿಳಿದರೆ ಟ್ರಾಫಿಕ್ ಜ್ಯಾಮ್ ಆಗುವುದಂತೂ ಖಂಡಿತಾ.
ಇದರಲ್ಲಿ ಇನ್ನಷ್ಟು ಓದಿ :