Widgets Magazine

ಕಲಬುರಗಿ ಕ್ಷೇತ್ರದ ಸಂಸದ ಹಾಗೂ ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ರೈತರು

ಕಲಬುರಗಿ| pavithra| Last Modified ಶನಿವಾರ, 15 ಫೆಬ್ರವರಿ 2020 (10:44 IST)
ಕಲಬುರಗಿ : ರೈತರ ಮತಬೇಕು, ಆದ್ರೆ ಅವರ  ಸಮಸ್ಯೆಗಳು ಮಾತ್ರ ಬೇಡ ಎಂದು ತಮ್ಮ ಕಷ್ಟಕ್ಕೆ ಸ್ಪಂದಿಸದ ಜನಪ್ರತಿನಿಧಿಗಳ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಕಲಬುರಗಿ ಕ್ಷೇತ್ರದ ಬಿಜೆಪಿ ಸಂಸದ ಡಾ.ಉಮೇಶ್ ಜಾಧವ್, ಶಾಸಕ ಪ್ರಿಯಾಂಕ್ ಖರ್ಗೆ ವಿರುದ್ಧ ರೈತರ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ಆಲ್ಲೂರು ಗ್ರಾಮದಲ್ಲಿ ಬಹುತೇಕ ರೈತರ ಜಮೀನು ಗುಡ್ಡದ ಮೇಲಿನ ಪ್ರದೇಶದಲ್ಲಿದೆ. ಹೀಗಾಗಿ ಜಮೀನುಗಳಿಗೆ ಹೋಗಲು, ರಸ್ತೆಯಿಲ್ಲದೆ ಕೃಷಿ ಮಾಡಲು ಸಾಧ್ಯವಾಗದೆ  ಪರದಾಡುತ್ತಿದ್ದಾರೆ. ರಸ್ತೆ ನಿರ್ಮಾಣಕ್ಕೆ ಜನಪ್ರತಿನಿಧಿಗಳು ಸ್ಪಂದಿಸದಿರುವ ಹಿನ್ನಲೆ ಸ್ವಂತ ಹಣದಿಂದಲೇ ರಸ್ತೆ ನಿರ್ಮಾಣ ಮಾಡುಲು ರೈತರು ಮುಂದಾಗಿದ್ದಾರೆ.


ರಸ್ತೆ ನಿರ್ಮಾಣಕ್ಕೆ 80 ಸಾವಿರ ರೂ. ಸಂಗ್ರಹಿಸಿರುವ ರೈತರು, ಗುಡ್ಡ ಕೊರೆದು, ಕಲ್ಲುಗಳನ್ನು ತೆಗೆದು ಈಗಾಗಲೇ 2 ಕಿಲೋ ಮೀಟರ್ ರಸ್ತೆ ನಿರ್ಮಿಸಿದ್ದಾರೆ. ಇನ್ನೂ 4-5ಕಿ.ಮೀ. ರಸ್ತೆ ನಿರ್ಮಾಣಕ್ಕೆ ರೈತರು  ಮುಂದಾಗಿದ್ದಾರೆ ಎನ್ನಲಾಗಿದೆ.

ಇದರಲ್ಲಿ ಇನ್ನಷ್ಟು ಓದಿ :