ಮೊನ್ನೆ ರಾತ್ರಿ ಯಲಹಂಕದ ರಸ್ತೆಯಲ್ಲಿ ಕಂಠಪೂರ್ತಿ ಕುಡಿದು ಆ್ಯಡಂ ಬಿದ್ದಪ್ಪ ಲ್ಯಾಷ್ ಡ್ರೈವ್ ಮಾಡಿದ್ದಾನೆ. ಈ ವೇಳೆ ಹಿಂದೆಯಿಂದ ರಾಹುಲ್ ಎಂಬಾತ ಹಾರನ್ ಮಾಡಿದ್ದಾರೆ. ಅಷ್ಟಕ್ಕೆ ಕಾರ್ ಓವರ್ ಟೇಕ್ ಮಾಡಿ ಕಾನ ಬ್ಲಾಕ್ ಮಾಡಿ ಆ್ಯಡಂ ಗಲಾಟೆ ಮಾಡಿದ್ದಾನೆ. ಕೂಡಲೇ ರಾಹುಲ್ ಪೊಲೀಸ್ ಎಮರ್ಜೆನ್ಸಿ ಸಂಖ್ಯೆ 112ಗೆ ಕರೆ ಮಾಡಿದ್ದಾರೆ. ಈ ವೇಳೆ ಸ್ಥಳಕ್ಕೆ ಬಂದ ಪೊಲೀಸರ ಜೊತೆ ಸಹ ಅಡಂ ಬಿದ್ದಪ್ಪ ಕೂಗಾಟ ಮಾಡಿ ಪುಂಡಾಟ ತೋರಿದ್ದಾನೆ.