ಬೆಂಗಳೂರು: ಸಾಮಾನ್ಯವಾಗಿ ನಾವು ಅಮ್ಮಂದಿರ ತ್ಯಾಗದ ಬಗ್ಗೆ, ಅವಳ ಕರುಣೆಯ ಬಗ್ಗೆ ಮಾತನಾಡುತ್ತೇವೆ. ಆದರೆ ಅಪ್ಪಂದಿರನ್ನು ಮರೆತೇ ಬಿಡುತ್ತೇವೆ.ನಮ್ಮ ಕಷ್ಟಗಳಿಗೆ ಹೆಗಲುಕೊಡುವ, ನಮ್ಮ ಎದುರಿಗೆ ಏನೂ ತೋರಿಸಿಕೊಳ್ಳದೇ ಇದ್ದರೂ ನಮಗಾಗಿ ಮಿಡಿಯುವ, ಅಗತ್ಯ ಬಂದಾಗ ರಕ್ಷಕನಂತೆ ನಿಲ್ಲುವ ಅಪ್ಪಂದಿರ ದಿನ ಇಂದು.ಅಮ್ಮನಂತೇ ಅಪ್ಪ ಯಾವುದನ್ನೂ ಬಹಿರಂಗವಾಗಿ ಹೇಳಿಕೊಳ್ಳಲ್ಲ. ಆದರೆ ನಮಗೆ ಅಗತ್ಯ ಬಂದಾಗ, ಬೇಕಾಗಿದ್ದನ್ನೆಲ್ಲಾ ಕೊಡಿಸಿ ನಮ್ಮ ಕಷ್ಟಕ್ಕೆ ಜೊತೆಯಾಗಿ ನಿಲ್ಲುವ ಮೊದಲ ಹೀರೋ ಅಪ್ಪ. ಅಂತಹ ಎಲ್ಲಾ ಅಪ್ಪಂದಿರಿಗೆ