ಕೊಪ್ಪಳ : ವಿದ್ಯುತ್ ತಂತಿ ಸ್ಪರ್ಶಿಸಿ ತಂದೆ ಸೇರಿ ಇಬ್ಬರು ಪುಟ್ಟ ಮಕ್ಕಳು ಸಾವನ್ನಪ್ಪಿರುವ ಘಟನೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಚಳಗೇರಿ ಗ್ರಾಮದಲ್ಲಿ ನಡೆದಿದೆ. ಹನುಮಪ್ಪ ಬೀರಪ್ಪನವರ (30), ಅವರ ಮಕ್ಕಳಾದ ಪ್ರಿಯಾಂಕಾ (4) ಮತ್ತು ಬೀರಪ್ಪ (2) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇಂದು ಬೆಳಗ್ಗೆ ಹೊಲದಲ್ಲಿ ಸೂರ್ಯಕಾಂತಿ ಬೀಜಗಳ ರಾಶಿ ಮಾಡಲು ಟ್ರ್ಯಾಕ್ಟರ್ ಮೇಲೆ ನಿಂತು ಕೆಲಸ ಮಾಡುವಾಗ ವಿದ್ಯುತ್ ತಂತಿ ಸ್ಪರ್ಶಿಸಿದ ಪರಿಣಾಮ ತಂದೆ ಮಕ್ಕಳು ಸಾವನಪ್ಪಿದ್ದಾರೆ.