ರಾಮನಗರ-ಕೆರೆಯಲ್ಲಿ ಕುರಿ ತೊಳೆಯಲು ಹೋಗಿ ತಂದೆ ಮಗ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಕುರುಬರಹಳ್ಳಿ ಗ್ರಾಮದಲ್ಲಿ ನಡೆದಿದೆ. ತಂದೆಗೆ 50 ವರ್ಷ, ಮಗ ಪ್ರಸನ್ನ 22 ವರ್ಷ ಸಾವಿಗೀಡಾದ ದುರ್ದೈವಿಗಳು. ನಿನ್ನೆ ಸಂಜೆ ಕುರಿ ಮೈ ತೊಳೆಯುತ್ತಿದ್ದಾಗ ಕಾಲು ಜಾರಿ ತಂದೆ ಕೆರೆಗೆ ಬಿದ್ದಿದ್ದಾರೆ.ತಂದೆಯನ್ನು ಕಾಪಾಡಲು ಹೋಗಿ ಮಗ ಸಹ ನೀರು ಪಾಲಾಗಿದ್ದಾನೆ. ಅಪ್ಪ ಮಗನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಇಬ್ಬರ ಮೃತ