ತಂದೆ-ಮಗಳು ದಾರುಣವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.ತಮ್ಮದೇ ತೋಟವೊಂದರಲ್ಲಿ ಹುಲ್ಲು ಕತ್ತರಿಸಲು ಹೋಗಿದ್ದ ತಂದೆ-ಮಗಳು ಮಳೆಯ ಸಂದರ್ಭದಲ್ಲಿ ಕಡಿದು ಬಿದ್ದ ವಿದ್ಯುತ್ ತಂತಿ ತುಳಿದು ಸಾವನ್ನಪ್ಪಿರುವ ಘಟನೆ ನಡೆದಿದೆ.ಮಂಗಳೂರಿನ ಬಂಟ್ವಾಳದ ಪಿಲಿಮೊಗ್ರು ಗ್ರಾಮದ ಬಾರೆಕ್ಕಿನಡಿ ಎಂಬಲ್ಲಿ ಈ ದುರ್ಘಟನೆ ಸಂಭವಿಸಿದೆ. ಕೃಷಿಕ ಗೋಪಾಲಕೃಷ್ಣ(65) ಮತ್ತು ಅವರ ಪುತ್ರಿ ದಿವ್ಯಶ್ರೀ (29) ಸಾವನ್ನಪ್ಪಿದ್ದಾರೆ.ದನಗಳಿಗೆ ಹುಲ್ಲು ಹಾಕಲು ಹುಲ್ಲು ತರಲೆಂದು ತೋಟಕ್ಕೆ ತಂದೆ-ಮಗಳು ತೆರಳಿದ್ದರು. ಈ ವೇಳೆ ಮಳೆ ಬಂದಿದೆ. ತೋಟದಲ್ಲಿ ಹಾದು ಹೋಗಿರುವ