ಉಡುಪಿ : ಕುಡಿದ ಮತ್ತಿನಲ್ಲಿ ತಂದೆಯೇ ಮಗನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ಕಾರ್ಕಳ ತಾಲೂಕಿನ ಮಂಗಳಪಾದೆಯಲ್ಲಿ ನಡೆದಿದೆ.ವಿಕ್ಟೋರ್ ಡಿಸೋಜಾ ಮಗನನ್ನೇ ಕೊಂದ ತಂದೆ. ವಿವಿಯನ್ ಮೃತಪಟ್ಟ ಮಗ. ಪ್ರತಿದಿನ ಮನೆಗೆ ಕುಡಿದು ಬಂದು ಜಗಳ ಮಾಡುತ್ತಿದ್ದ ವಿಕ್ಟೋರ್ ಮಂಗಳವಾರದಂದು ಕುಡಿದ ಬಂದು ವಿವಿಯನ್ ಜೊತೆ ಜಗಳವಾಡಿ ಚಾಕುವಿನಿಂದ ಮಗನ ತೊಡೆಗೆ ಚುಚ್ಚಿದ್ದಾನೆ. ಇದರ ಪರಿಣಾಮ ಅಧಿಕ ರಕ್ತಸ್ರಾವದಿಂದ ಮಗನಿಗೆ ಪ್ರಜ್ಞೆ ತಪ್ಪಿದೆ. ಬಳಿಕ ತಾಯಿ ಮತ್ತೊಬ್ಬ ಮಗನ