ದಾವಣಗೆರೆ : ಸಿಮ್ ಬೇಕು ಎಂದು ಕೇಳಿದ್ದಕ್ಕೆ ಅನುಮಾನಗೊಂಡ ತಂದೆ ಮಗಳನ್ನೇ ಕೊಲೆ ಮಾಡಿದ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಬಿಸ್ತುವಳ್ಳಿ ಗ್ರಾಮದಲ್ಲಿ ನಡೆದಿದೆ. ಅನಿತಾ ಕೊಲೆಯಾದ ಯುವತಿ, ಕಲ್ಲೇಶಪ್ಪ ಮಗಳನ್ನೇ ಕೊಂದ ತಂದೆ. ಅನಿತಾ ಫೋನಿನಲ್ಲಿ ಮಾತನಾಡಲು ಸಿಮ್ ಬೇಕು ಎಂದು ತನ್ನ ತಂದೆಯ ಬಳಿ ಕೇಳಿದ್ದಾಳೆ. ಇದಕ್ಕೆ ತಂದೆ ವಿರೋಧ ವ್ಯಕ್ತಪಡಿಸಿದ್ದಾರೆ. ಆಗ ಅವರಿಬ್ಬರ ನಡುವೆ ಜಗಳ ನಡೆದಿದೆ. ಕೊನೆಗೆ ತಂದೆ ಸಿಮ್ ಕೊಡಿಸುವುದಾಗಿ ಹೇಳಿ