ಡೆಡ್ಲಿ ಕೊರೊನಾ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದ ರೀತಿ ಅಷ್ಟಿಷ್ಟಲ್ಲ. ಸಾಕಷ್ಟು ಮನೆಗಳಲ್ಲಿ ಅನೇಕ ಸ್ಥಿತ್ಯಂತರಗಳನ್ನು ತಂದೊಡ್ಡಿತು. ಈಗೀಗ ನಿಧಾನ ಎಲ್ಲವೂ ಹಾದಿಗೆ ಬರುತ್ತಿದೆ. ಆದರೆ ಅದರ ಮಧ್ಯೆ ಉಂಟಾದ ನೋವು, ದುಃಖ, ಆದರೂ ನೋವ ನುಂಗಲೇಬೇಕು, ಮತ್ತೆ ಶಕ್ತಿ ತಂದುಕೊಳ್ಳಲೇಬೇಕು. ಇದೀಗ ವೈರಲ್ ಆಗುತ್ತಿರುವ ಈ ವಿಡಿಯೋ ಬಹಳ ಹೃದಯಸ್ಪರ್ಶಿಯಾಗಿದೆ. ಹೆಣ್ಣುಮಕ್ಕಳಿಗೆ ಹೆಚ್ಚು ಆಪ್ತವೆನ್ನಿಸುವ ಜೀವ ಅಪ್ಪನೇ. ಆ ಸಂಬಂಧ, ಅನುಬಂಧವನ್ನು ವಿವರಿಸಲಾಗದು. ಈ ವಿಡಿಯೋದಲ್ಲಿ ಮಗಳು ಶಾಲೆಯಿಂದ ಬಂದು ಕಣ್ಣುಮುಚ್ಚಿಕೊಂಡು