ಬೆಂಗಳೂರು: ಎರಡನೇ ಪತ್ನಿಯ ಚಾಡಿ ಮಾತು ಕೇಳಿಕೊಂಡು ತನ್ನ ಮೂವರು ಮಕ್ಕಳಿಗೇ ಚಿತ್ರಹಿಂಸೆ ಕೊಡುತ್ತಿದ್ದ ಪಾಪಿ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ. ರಾಗಿಗುಡ್ಡ ನಿವಾಸಿ ಸೆಲ್ವನ್ ಹಾಗೂ ಆತನ ಎರಡನೇ ಪತ್ನಿ ಸತ್ಯಾ ಬಂಧಿತ ದಂಪತಿ. ಈ ಇಬ್ಬರೂ ಮೂವರು ಮಕ್ಕಳ ಬಾಯಿಗೆ ಬಟ್ಟೆ ತುರುಕಿ, ಮೈ ಕೈಗೆಲ್ಲಾ ಬರೆ ಹಾಕುತ್ತಿದ್ದುದಲ್ಲದೇ, ಸ್ಕ್ರೂ ಡ್ರೈವರ್ ನಿಂದ ಗಾಯ ಮಾಡಿ ಚಿತ್ರಹಿಂಸೆ ನೀಡುತ್ತಿದ್ದರು.ಇದು ನೆರೆಹೊರೆಯವರ ಗಮನಕ್ಕೆ ಬಂದು ಪೊಲೀಸರಿಗೆ ದೂರು ನೀಡಿದ್ದಾರೆ.