ಕುರುಬ ಸಮಯದಾಯಕ್ಕೆ ಸುಳ್ಳು ಪರಿಶಿಷ್ಟ ಪಂಗಡ ಜಾತಿ ಪ್ರಮಾಣ ಪತ್ರ ಕೊಡುವುದನ್ನು ವಿರೋಧಿಸಿ ಅಕ್ಟೋಬರ್ 16 ರಂದು ವಾಲ್ಮೀಕಿ ನಾಯಕರ ಸಂಘವು ಹಮ್ಮಿಕೊಂಡ ಪ್ರಾದೇಶಿಕ ಆಯುಕ್ತರ ಕಚೇರಿ ಮುತ್ತಿಗೆ ಹೋರಾಟ ಕೂಡಲೇ ಹಿಂಪಡೆಯಬೇಕು ಎಂಬ ಆಗ್ರಹ ಕೇಳಿಬಂದಿದೆ.ಇಲ್ಲದಿದ್ದರೆ ನಾಯ್ಕಾಡ ಜನಾಂಗದ ಹೆಸರಿನಲ್ಲಿ ಎಸ್ಟಿ ಸುಳ್ಳು ಜಾತಿ ಪ್ರಮಾಣ ಪತ್ರ ಪಡೆಯುವುದರ ವಿರುದ್ಧ ನವೆಂಬರ್ ಮೊದಲ ವಾರದಲ್ಲಿ ಎಂಟು ಜಿಲ್ಲೆಗಳ ಗೊಂಡ ಸಮಾಜ ಬಾಂಧವರು ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಕಲಬುರಗಿ