ಎರಡು ಗುಂಪುಗಳ ಜನರ ನಡುವೆ ಮಾರಾಮಾರಿಯಾಗಿದೆ. ಮೃತ ವ್ಯಕ್ತಿಯ ಅಂತ್ಯಕ್ರಿಯೆ ವಿಷಯವಾಗಿ ಈ ಘಟನೆ ನಡೆದಿದೆ. ಸ್ಮಶಾನ ಜಾಗೆಯ ವಿಷಯಕ್ಕೆ ಸಂಬಂಧಿಸಿದಂತೆ ನಡೆದ ಎರಡು ಗುಂಪುಗಳ ನಡುವಿನ ಮಾರಾಮಾರಿಯಲ್ಲಿ ಮೂವರು ಗಾಯಗೊಂಡಿದ್ದಾರೆ. ಹೊಸಕೋಟೆ ತಾಲೂಕಿನ ಓಬಳಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಸ್ಮಶಾನ ಜಾಗ ಗುರುತಿಸಲು ಅಧಿಕಾರಿಗಳ ಸಮೇತ ದಲಿತರು ಸ್ಥಳಕ್ಕೆ ಭೇಟಿ ನೀಡಿದಾಗ ಈ ಘಟನೆ ನಡೆದಿದೆ. ಸ್ಮಶಾನಕ್ಕೆ ಮೀಸಲಿರುವ ಜಾಗವನ್ನು ಅಕ್ರಮಣ ಮಾಡಿಕೊಂಡಿದ್ದಾರೆ ಎಂದು ಕೆಲವರು ದೂರಿದ್ದಾರೆ.