ಚಿತ್ರನಟ, ನಿರ್ದೇಶಕ ಮಾಸ್ಟರ್ ಆನಂದ್ ಅವರಿಗೆ ನಿವೇಶನ ನೀಡುವುದಾಗಿ 18.50 ಲಕ್ಷ ಮುಂಗಡ ಹಣ ಪಡೆದು ವಂಚಿಸಲಾಗಿದ್ದು, ಚಂದ್ರ ಲೇಔಟ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. 2020ರ ಸೆಪ್ಟಂಬರ್ನಿಂದ 2021 ರ ಅಕ್ಟೋಬರ್ನ ಅವಧಿಯಲ್ಲಾದ ವಂಚನೆಗೆ ಸಂಬಂಧಿಸಿದಂತೆ ಮಲ್ಟಿ ಲೀಪ್ ವೆಂಚರ್ಸ್ ಕಂಪನಿ ವಿರುದ್ಧ ಮಾಸ್ಟರ್ ಆನಂದ್ ಚಂದ್ರ ಲೇಔಟ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಕೊಮ್ಮಘಟ್ಟದ ರಾಮಸಂದ್ರ ಗ್ರಾಮದಲ್ಲಿ ಆನಂದ್ ಶೂಟಿಂಗ್ಗಾಗಿ ತೆರಳಿದ್ದ ವೇಳೆ ನಿವೇಶನಗಳನ್ನು ನೋಡಿದ್ದರು. ಮನಿಕಾ ಕೆಂ.ಎಂ.ನಿಂದ ನಿವೇಶನ