ಮೈಸೂರಿನಲ್ಲಿ ಚಿತ್ರ ನಗರಿ ಕಾಮಗಾರಿಗಳನ್ನು ಇದೇ ವರ್ಷ ಪ್ರಾರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಕಟಿಸಿದ್ದಾರೆ. ನಟಸಾರ್ವಭೌಮ ಡಾ ರಾಜಕುಮಾರ್ ಅವರ 94 ನೇ ಜನ್ಮದಿನಾಚರಣೆ ಹಾಗೂ 2017 ನೇ ದಿನದರ್ಶೀ ವರ್ಷದ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಈ ಘೋಷಣೆ ಮಾಡಿದರು. ಯಾರೂ ಮನವಿ ಅಥವಾ ಬೇಡಿಕೆ ಸಲ್ಲಿಸದಿದ್ದರೂ ಪ್ರಸಕ್ತ 2022-23 ನೇ ಸಾಲಿನ ರಾಜ್ಯ ಆಯವ್ಯಯದಲ್ಲಿ ತಾವು 125 ಕನ್ನಡ ಮತ್ತು ಪ್ರಾದೇಶಿಕ ಚಲನಚಿತ್ರಗಳಿಗೆ