ರಾತ್ರಿ ವೇಳೆ ಲಾರಿ ಅಡ್ಡಗಟ್ಟಿ ಸುಲಿಗೆ ನಡೆಸುತ್ತಿದ್ದ ಖದೀಮರನ್ನು ಕೊನೆಗೂ ಪೊಲೀಸರು ಬಂಧಿಸಿದ್ದಾರೆ. ಬೀದರ್ ಜಿಲ್ಲೆಯ ಹುಮನಾಬಾದ್ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, 3 ಜನ ಸುಲಿಗೆಕೋರರ ಬಂಧನ ಮಾಡಿದ್ದಾರೆ.ಮಲ್ಲುರೆಡ್ಡಿ (23), ಯುನೂಸ್ (25), ಮಹ್ಮದ್ ಜಹಾಂಗೀರ್ (25) ಬಂಧಿತ ಆರೋಪಿಗಳಾಗಿದ್ದಾರೆ. ಹುಮನಾಬಾದ್ ಬೀದರ್ ಮಾರ್ಗದ ಅರಣ್ಯಪ್ರದೇಶದಲ್ಲಿ ಸುಲಿಗೆ ನಡೆಸುತ್ತಿದ್ದರು.ಬಂಧಿತರಿಂದ 3 ಚಾಕು, ಎರಡು ಮೊಬೈಲ್ ಹಾಗೂ ನಗದು ವಶಕ್ಕೆ ತೆಗೆದುಕೊಳ್ಳಲಾಗಿದೆ. ಕಳೆದ ತಿಂಗಳು ಹುಮನಾಬಾದ್ ತಾಲೂಕಿನ ಕಬೀರಾಬಾದ್ ವಾಡಿ