ಮಂಗಳೂರು: ಕೆಫೆ ಕಾಫಿ ಡೇ ಸಂಸ್ಥಾಪಕ ಸಿದ್ಧಾರ್ಥ್ ಮೃತದೇಹ ನೇತ್ರಾವತಿ ಹಿನ್ನೀರಿನಲ್ಲಿ ಪತ್ತೆಯಾದ ಬಳಿಕ ಮತ್ತೊಂದು ಅನುಮಾನ ಶುರುವಾಗಿದೆ. ಮೃತದೇಹ ಪತ್ತೆಯಾಗುವುದರೊಂದಿಗೆ ಸಿದ್ಧಾರ್ಥ್ ನಾಪತ್ತೆ ಪ್ರಕರಣಕ್ಕೆ ಒಂದು ರೀತಿಯ ವಿರಾಮವೇನೋ ಸಿಕ್ಕಿತು. ಆದರೆ ಮೃತದೇಹ ನೋಡಿದ ಮೇಲೆ ಮತ್ತಷ್ಟು ಅನುಮಾನಗಳು ಹುಟ್ಟಿಕೊಂಡಿವೆ.ಸಿದ್ಧಾರ್ಥ್ ತೊಟ್ಟಿದ್ದ ಶೂ, ಬೆಲ್ಟ್ ಮತ್ತು ಪ್ಯಾಂಟ್ ಹಾಗೆಯೇ ಮೃತದೇಹದ ಮೇಲಿತ್ತು. ಆದರೆ ಅಂಗಿ ಮಾತ್ರ ಇರಲಿಲ್ಲ. ಹೀಗಾಗಿ ನದಿಗೆ ಹಾರುವ ಮುನ್ನ ಅಂಗಿ ಕಳಚಿಟ್ಟರೇ ಅಥವಾ ಅದು