ಪ್ರೀತಿಸಿ ಮದುವೆಯಾದ ಗಂಡನ ಅಸಲಿಯತ್ತು ಕೊನೆಗೂ ಬಯಲಾಯ್ತು!

ಗಾಂಧಿನಗರ| pavithra| Last Modified ಶನಿವಾರ, 19 ಸೆಪ್ಟಂಬರ್ 2020 (09:42 IST)
ಗಾಂಧಿನಗರ : ಸಲಿಂಗಕಾಮಿ ಎಂಬುದನ್ನು ಮುಚ್ಚಿಡಲು ವ್ಯಕ್ತಿಯೊಬ್ಬ ಮಹಿಳೆಯನ್ನು ಮದುವೆಯಾಗಿ ಕೊನೆಗೆ ಆಕೆಗೆ  ಹಿಂಸೆ ನೀಡಿದ  ಘಟನೆ ಗುಜರಾತ್ ನ ಗಾಂಧಿನಗರದಲ್ಲಿ ನಡೆದಿದೆ.

ತಾನು ಸಲಿಂಗಕಾಮಿ ಎಂಬುದು ಜಗತ್ತಿಗೆ ತಿಳಿಯಬಾರದೆಂದು ಮಹಿಳೆಯೊಬ್ಬಳನ್ನು ಪ್ರೀತಿಸಿ ಮದುವೆಯಾಗಿದ್ದಾನೆ. ಆದರೆ 1 ವರ್ಷದವರೆಗೆ ಚೆನ್ನಾಗಿದ್ದ ಆತ ಬಳಿಕ ಪುರುಷರ ಜೊತೆ ಸಂಬಂಧ ಬೆಳೆಸಲು ಶುರುಮಾಡಿದ. ಈ ವಿಚಾರ ಪತ್ನಿಗೆ ತಿಳಿದು ಆಕೆ ಈ ಬಗ್ಗೆ ಪ್ರಶ್ನಿಸಿದಾಗ ಆಕೆಯನ್ನು ಹೊಡೆದು ಈ ಬಗ್ಗೆ ಯಾರಿಗೂ ಹೇಳಬಾರದೆಂದು ಬೆದರಿಕೆ ಹಾಕಿದ್ದಾನೆ.

ಈ ಬಗ್ಗೆ ಪತ್ನಿ ಪತಿಯ ವಿರುದ್ಧ ಗಾಂಧಿನಗರ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.ಇದರಲ್ಲಿ ಇನ್ನಷ್ಟು ಓದಿ :