ಕೇಂದ್ರ ಸರಕಾರ ನೋಟ್ ಅಮಾನ್ಯಗೊಳಿಸಿ ವರುಷಗಳೇ ಕಳೆಯುತ್ತ ಬರುತ್ತಿವೆ. ಆದರೆ ಈಗಲೂ ಹಳೆಯ 500 ಮತ್ತು 1000 ಮುಖಬೆಲೆಯ ನೋಟುಗಳು ಅಲ್ಲಲ್ಲಿ ಕಾಣಿಸಿಕೊಂಡು ಸುದ್ದಿ ಮಾಡುತ್ತಿವೆ. ಬೆಳಗಾವಿ ಜಿಲ್ಲೆಯ ಸವದತ್ತಿ ಪಟ್ಟಣದ ಚರಂಡಿಯಲ್ಲಿ ಹಳೆಯ 500 ಹಾಗೂ 1000 ರೂ. ಮುಖಬೆಲೆಯ ನೋಟುಗಳು ಪತ್ತೆಯಾಗಿವೆ. ಸವದತ್ತಿಯ ಬೆಣ್ಣಿಕಟ್ಟಿ ಓಣಿಯ ಚರಂಡಿಯಲ್ಲಿ ಅಮಾನ್ಯಗೊಂಡ ನೋಟುಗಳು ಕಾಣಿಸಿಕೊಂಡಿವೆ. ಅರ್ಧ ಸುಟ್ಟ ಸ್ಥಿತಿಯಲ್ಲಿ ನೋಟುಗಳು ಜನರ ಕಣ್ಣಿಗೆ ಬಿದ್ದಿವೆ. ಸ್ಥಳೀಯರ ಅಂದಾಜಿನ