ಚಾಮರಾಜನಗರ : ಜಿಲ್ಲೆಯ ಕೊಳ್ಳೇಗಾಲ ಪಟ್ಟಣದ ಕಾವೇರಿ ರಸ್ತೆಯ ಚರಂಡಿ ಬಳಿ ನವಜಾತ ಹೆಣ್ಣು ಶಿಶುವಿನ ಮೃತದೇಹ ಪತ್ತೆಯಾಗಿದೆ. ಕಾವೇರಿ ರಸ್ತೆಯ ಅಂಗನವಾಡಿ ಮುಂಭಾಗದ ಚರಂಡಿ ಬಳಿ ಚೀಲವೊಂದರಲ್ಲಿ ನವಜಾತ ಶಿಶುವನ್ನು ಇಟ್ಟು ಬಿಸಾಡಲಾಗಿತ್ತು. ಚೀಲ ತೆಗೆದು ನೋಡಿದಾಗ ನವಜಾತ ಶಿಶು ಕಂಡು ಗಾಬರಿಗೊಂಡ ಜನರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಪೊಲೀಸರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಾಧಿಕಾರಿಗಳು ಭೇಟಿ, ಪರಿಶೀಲನೆ ನಡೆಸಿದ್ದು, ಹೆತ್ತವರೇ ಚೀಲದಲ್ಲಿಟ್ಟು ಎಸೆದು ಹೋಗಿರುವ