ಮಣಿಪುರ :ಬಿಷ್ಣುಪುರ ಪೊಲೀಸ್ ಠಾಣೆಯ ಶಸ್ತ್ರಾಗಾರ ಹಾಗೂ 2ನೇ ಮೀಸಲು ಬೆಟಾಲಿಯನ್ ಶಸ್ತ್ರಾಗಾರದಿಂದ ದಂಗೆ ಕೋರರು ಶಸ್ತ್ರಾಸ್ತ್ರಗಳನ್ ಲೂಟಿ ಮಾಡಿದ್ದರು. ಕಳೆದ ವರ್ಷ ಮಣಿಪುರದಲ್ಲಿ ನಡೆದ ಹಿಂಸಾಚಾರ ಪ್ರಕರಣದ ವೇಳೆ ಪೊಲೀಸ್ ಠಾಣೆ ಹಾಗೂ ಮಿಲಿಟರಿ ಮುಖ್ಯ ಕಚೇರಿಗೆ ನುಗ್ಗಿ ಶಸ್ತ್ರಾಸ್ತ್ರಗಳನ್ನು ಲೂಟಿ ಮಾಡಿದ್ದ ಪ್ರಕರಣದಲ್ಲಿ ಸಿಬಿಐ ಏಳು ಮಂದಿಯ ವಿರುದ್ದ ಎಫ್ಐಆರ್ ದಾಖಲಿಸಿ ದೆ. 300 ಕ್ಕೂ ಹೆಚ್ಚು ಬಂದೂಕುಗಳು ಹಾಗೂ 19, 800 ಸುತ್ತು ಗಂಡುಗಳನ್ನು ದೋಚಲಾಗಿತ್ತು.