ರಾಜ್ಯ ಸಭೆ ಚುನಾವಣೆಯ ವೇಳೆ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಜೆಡಿಎಸ್ ಶಾಸಕ ಮಲ್ಲಿಕಾರ್ಜುನ್ ಖೂಬಾ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಕುಟುಕು ಕಾರ್ಯಾಚರಣೆಯ ಸಿಡಿ ಪರಿಶೀಲಿಸಿ ಎಫ್ಐಆರ್ ದಾಖಲಿಸುವಂತೆ ಕೇಂದ್ರ ಚುನಾವಣೆ ಆಯೋಗ ಅಂದಿನ ಚುನಾವಣಾಧಿಕಾರಿಯಾಗಿದ್ದ ಎಸ್ ರಾಮಮೂರ್ತಿಯವರಿಗೆ ಸೂಚನೆ ನೀಡಿತ್ತು. ಆಯೋಗದ ಸೂಚನೆಯಂತೆ ಮೂರ್ತಿಯವರು ಶಾಸಕ ಖೂಬಾ ವಿರುದ್ಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. 2016 ಜೂನ್ 11 ರಂದು ನಡೆದ ರಾಜ್ಯಸಭೆ