ಹೋಂ ಕ್ವಾರಂಟೈನ್ ನಿಯಮ ಉಲ್ಲಂಘಿಸಿದ ಐವರ ಮೇಲೆ ಕೇಸ್ ದಾಖಲಾಗಿದೆ. ಉತ್ತರಕನ್ನಡ ಜಿಲ್ಲೆಯ ಹಳಿಯಾಳದಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಬಗ್ಗೆ ಮಾಹಿತಿ ನೀಡಿದ ಹಳಿಯಾಳ ತಹಶೀಲ್ದಾರ್ ವಿದ್ಯಾಧರ ಗುಳಗುಳೆ, ಹೋಂ ಕ್ವಾರಂಟೈನ್ ಇದ್ದು, ಕೋವಿಡ್-19 ರೋಗ ಪತ್ತೆ ಪರೀಕ್ಷೆಗಾಗಿ ಗಂಟಲು ದ್ರವವನ್ನು ನೀಡಿ ಮನೆಯಲ್ಲಿಯೇ ಇರದೆ ಹೊರಗೆ ಸುತ್ತಾಡಿ ನಿಯಮ ಉಲ್ಲಂಘಿಸಿದ ಹಳಿಯಾಳ ತಾಲೂಕಿನ ಯಡೋಗಾ ಗ್ರಾಮದ ಇಬ್ಬರು, ಬೆಳವಟಗಿ, ತತ್ವಣಗಿ ಹಾಗೂ ಮುಂಡವಾಡ ಗ್ರಾಮದ ತಲಾ ಓರ್ವ ಸೇರಿದಂತೆ