ಬೆಂಗಳೂರು: ಯಲಹಂಕಾ ವಾಯುನೆಲೆಯಲ್ಲಿ ನಡೆಯುತ್ತಿರುವ ಏರ್ ಶೋನಲ್ಲಿ ಅಗ್ನಿದುರಂತ ಸಂಭವಿಸಿದ್ದು, 50 ಕ್ಕೂ ಹೆಚ್ಚು ವಾಹನಗಳು ಸುಟ್ಟು ಕರಕಲಾಗಿವೆ.ಪಾರ್ಕಿಂಗ್ ಏರಿಯಾ ಬಳಿ ಒಣ ಹುಲ್ಲಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ ಕಾರಣ ಪಕ್ಕದಲ್ಲಿ ನಿಲ್ಲಿಸಿದ್ದ ವಾಹನಗಳು ಬೆಂಕಿಗೆ ಆಹುತಿಯಾಗಿವೆ. ಸ್ಥಳದಲ್ಲಿ ಸುಮಾರು 700 ಕ್ಕೂ ಹೆಚ್ಚು ವಾಹನಗಳನ್ನು ಪಾರ್ಕ್ ಮಾಡಲಾಗಿತ್ತು.ಮೊನ್ನೆಯಷ್ಟೇ ಏರ್ ಶೋ ಆರಂಭಕ್ಕೂ ಮೊದಲು ಸೂರ್ಯ ಕಿರಣ ವಿಮಾನ ದುರಂತದಲ್ಲಿ ಪೈಲಟ್ ಸಾವಿಗೀಡಾಗಿದ್ದರು. ಇದರ ಬಳಿಕ ಇದೀಗ ಮತ್ತೊಂದು ದುರಂತ