Widgets Magazine

ಸಿಎಎ ವಿರೋಧಿಸಿ ಉಡುಪಿಯಲ್ಲಿ ಪ್ರತಿಭಟನೆ

ಉಡುಪಿ| pavithra| Last Updated: ಸೋಮವಾರ, 27 ಜನವರಿ 2020 (10:48 IST)
ಉಡುಪಿ : ಕೇಂದ್ರ ಸರ್ಕಾರದ ವಿರೋಧಿಸಿ ದೇಶದಾದ್ಯಂತ ಹಲವಡೆ ಪ್ರತಿಭಟನೆ ನಡೆಯುತ್ತಿದ್ದು, ಇದೀಗ ಉಡುಪಿಯಲ್ಲಿ ಸಿಎಎ ವಿರೋಧಿಸಿ ಪ್ರತಿಭಟನಕಾರರು ಪಂಜು ಹಿಡಿದು ಪ್ರತಿಭಟನೆ ನಡೆಸಿದ್ದಾರೆ.

ಕರ್ನಾಟಕ ದಲಿತ ಸಂಘರ್ಷ ಸಮಿತಿ ಬೆಂಕಿ ಪ್ರತಿಭಟನೆಗೆ ಕರೆ ನೀಡಿದ್ದು, ಹಲವು ಸಂಘಟನೆಗಳು ಇದಕ್ಕೆ ಕೈಜೋಡಿಸಿದ್ದು, ನೂರಾರು ಜನರು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ.

ರಸ್ತೆಗಿಳಿಯಲು ಪೊಲೀಸರು ಅವಕಾಶ ಕೊಡದ ಹಿನ್ನಲೆಯಲ್ಲಿ ನಗರದ ಅಜ್ಜರಕಾಡು ಹುತಾತ್ಮ ಸೈನಿಕರ ಯುದ್ದ ಸ್ಮಾರಕದ ಬಳಿ ಜನರು ಕೊಳ್ಳಿ ಹಿಡಿದು ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದ್ದಾರೆ.



ಇದರಲ್ಲಿ ಇನ್ನಷ್ಟು ಓದಿ :