ಕಲಬುರ್ಗಿ: ಜಿಲ್ಲಾ ಆಸ್ಪತ್ರೆಯ ಎಕ್ಸ್ ರೇ ತೆಗೆಯುವ ಕೋಣೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ನಾಲ್ವರು ಸಿಬ್ಬಂದಿ ಅಸ್ವಸ್ಥಗೊಂಡಿದ್ದಾರೆ. ಎಸಿ ಸ್ಟಬಿಲೈಜರ್ ಸ್ಫೋಟಗೊಂಡ ಪರಿಣಾಮ ಬೆಂಕಿ ಹೊತ್ತಿಕೊಂಡಿದೆ ಎಂದು ಹೇಳಲಾಗುತ್ತಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಇಟ್ಟಿದ್ದ ದಹನ ಸಿಲಿಂಡರ್ ನಿಂದ ಆಸ್ಪತ್ರೆ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಆದರೆ ಈ ಸಂದರ್ಭದಲ್ಲಿ ಕೋಣೆಯಲ್ಲಿರುವ ಮಷಿನ್ ಹೊರತೆಗೆಯಲು ಹೋದಾಗ ವಿಷಕಾರಿ ಹೊಗೆ ಸೇವಿಸಿದ ಪರಿಣಾಮ ನಾಲ್ವರು ಸಿಬ್ಬಂದಿ ಅಸ್ವಸ್ಥಗೊಂಡಿದ್ದಾರೆ.ಡಿ ಗ್ರೂಪ್ ಸಿಬ್ಬಂದಿ ಸಾತಲಿಂಗ್ , ಫಜಲ್, ರಾಚಪ್ಪ ಮತ್ತು