ಬೆಂಗಳೂರು: ದೀಪಾವಳಿ ಹಬ್ಬದ ಸಂಭ್ರಮದ ವೇಳೆ ಪಟಾಕಿ ಅವಘಡ ಸಂಭವಿಸಿದ್ದು, ಇಬ್ಬರು ಯುವಕರು ಸೇರಿದಂತೆ 11 ಮಂದಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಾಂದರ್ಭಿಕ ಚಿತ್ರ ನಾರಾಯಣ ನೇತ್ರಾಲಯದಲ್ಲಿ 6 ಮಕ್ಕಳು ಸೇರಿದಂತೆ ಇಬ್ಬರು ಯುವಕರು ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಮಿಂಟೋ ಆಸ್ಪತ್ರೆಗೆ 3 ಜನ ಮಕ್ಕಳು ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾಯಗೊಂಡವರ ಪೈಕಿ ಹೆಚ್ಚಿನವರಿಗೆ ಕಣ್ಣಿಗೆ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.ಆಡುಗೋಡಿಯಲ್ಲಿ ಶಾರುಖ್ ಎಂಬ ಯುವಕ ಯಾರೋ ಹಚ್ಚಿದ