ನೀಲಗಿರಿ ತೋಪಿನಲ್ಲಿ ಏಕಾಏಕಿಯಾಗಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಲಕ್ಷಾಂತರ ಮೌಲ್ಯದ ನೀಲಗಿರಿ ಭಸ್ಮವಾಗಿದೆ. ನೆಲಮಂಗಲದ ಬಳಿಯಿರುವ ನೀಲಗಿರಿ ತೋಪಿನಲ್ಲಿ ಆಕಸ್ಮಿಕ ಬೆಂಕಿ ತಗಲಿ ಸುಮಾರು 15 ಎಕರೆಯಲ್ಲಿ ಬೆಳೆಯಲಾಗಿದ್ದ ನೀಲಗಿರಿ ಭಸ್ಮವಾಗಿರುವ ಘಟನೆ ನಡೆದಿದೆ.ಚನ್ನೋಹಳ್ಳಿ ಗ್ರಾಮದಲ್ಲಿರುವ ನೀಲಗಿರಿ ತೋಪಿನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದೆ. ರೈತರಾದ ಹನುಮಂತರಾಯಪ್ಪ, ಮಂಗಳಗೌರಮ್ಮ, ವಿಶ್ವನಾಥ್, ಗೋವಿಂದರಾಜು, ನಾರಾಯಣಪ್ಪಗೆ ಸೇರಿದ ಸುಮಾರು ಹತ್ತಕ್ಕೂ ಅಧಿಕ ಎಕರೆ ಬೆಂಕಿಗೆ ಅಹುತಿಯಾಗಿದೆ. ಘಟನೆಯಲ್ಲಿ ಲಕ್ಷಾಂತರ ರೂ. ಮೌಲ್ಯದ ನೀಲಗಿರಿ