ತಾಲೂಕು ಕಚೇರಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕಚೇರಿಯ ಕಂಪ್ಯೂಟರ್ ಗಳು ಅಲ್ಲದೇ ಸರಕಾರಿ ದಾಖಲಾತಿಗಳು ಸುಟ್ಟು ಕರಕಲಾಗಿವೆ. ದೇವದುರ್ಗದ ತಾಲೂಕು ಕಚೇರಿಯಲ್ಲಿ ಬೆಂಕಿ ಅವಘಡ ಸಂಭವಿಸಿದೆ. 8 ನೇ ಕೊಠಡಿಯಲ್ಲಿ ಕಾಣಿಸಿಕೊಂಡ ಬೆಂಕಿಗೆ ದಾಖಲಾತಿಗಳು ಸುಟ್ಟು ಭಸ್ಮವಾಗಿವೆ. ಆದಾಯ ಮತ್ತು ಜಾತಿ ಪ್ರಮಾಣ ಪತ್ರ, ಪಹಣಿ ವಿತರಿಸುತ್ತಿದ್ದ ಕೊಠಡಿಗೆ ಬೆಂಕಿ ತಗಲಿದೆ. ಹಲವಾರು ದಾಖಲೆಗಳು ಹಾಗೂ ಕಂಪ್ಯೂಟರ್ ಸುಟ್ಟಿದೆ.ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿ ಬೆಂಕಿ ನಂದಿಸಿದರು. ತಡರಾತ್ರಿಯಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ