ಬಂಡೀಪುರ ಅಭಯಾರಣ್ಯಕ್ಕೆ ಬೆಂಕಿ ತಗುಲಿದ್ದು ಅಪಾರ ಪ್ರಮಾಣದ ಕಾಡು ನಾಶವಾಗಿದೆ. ಆದರೆ ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮಾಹಿತಿ ಕೊರತೆ ಇರುವುದು ಎದ್ದು ಕಂಡಿದೆ.ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಅರಣ್ಯಕ್ಕೆ ಬೆಂಕಿಬಿದ್ದು ಸಾವಿರಾರು ಎಕರೆ ಭಸ್ಮವಾದ ಹಿನ್ನೆಲೆಯಲ್ಲಿ ಭೇಟಿ ನೀಡಿದರು. ಬಂಡೀಪುರ ಅರಣ್ಯದಲ್ಲಿ ಸುಟ್ಟು ಕರಕಲಾಗಿರುವ ಭಾಗವನ್ನ ಪರಿಶೀಲನೆ ಮಾಡಿದ ಸಚಿವ ಪುಟ್ಟರಂಗಶೆಟ್ಟಿ, ಅರಣ್ಯದೊಳಗೆ ಸುಮಾರು 12 ಕಿ.ಮೀ ಒಳಗೆ ಪ್ರವೇಶ ಮಾಡಿ,