ಬಿಸಿಲೂರು ಖ್ಯಾತಿಯ ಜಿಲ್ಲೆಯಲ್ಲಿ ಬೆಳ್ಳಂಬೆಳಗ್ಗೆ ಗುಂಡಿನ ಸದ್ದು ಕೇಳಿಬಂದಿದೆ. ಕುಖ್ಯಾತ ರೌಡಿ ಶೀಟರ್ ನ ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ.ಕಲಬುರಗಿಯಲ್ಲಿ ಬೆಳ್ಳಂಬೆಳಿಗ್ಗೆ ಪೊಲೀಸರಿಂದ ಫೈರಿಂಗ್ ನಡೆದಿದೆ. ಕುಖ್ಯಾತ ರೌಡಿಶೀಟರ್ ಸೆವೆನ್ ಸ್ಟಾರ್ ಪ್ರದೀಪ್ ಮೇಲೆ ಫೈರಿಂಗ್ ಆಗಿದೆ.ಕಲಬುರಗಿಯ ಶಹಬಾದ್ ರಸ್ತೆಯ ಗ್ರಿನ್ ಸಿಟಿ ಬಳಿ ಘಟನೆ ನಡೆದಿದೆ. ಸೆವೆನ್ ಸ್ಟಾರ್ ಪ್ರದೀಪ್ ನನ್ನು ಬಂಧಿಸಲು ಹೋದಾಗ ಪೊಲೀಸರ ಮೇಲೆ ಹಲ್ಲೆ ಮಾಡಿದ ಪ್ರದೀಪ್. ಹಲ್ಲೆ ವೇಳೆ ಮೂವರು ಪೊಲೀಸರಿಗೆ ಗಾಯಗಳಾಗಿವೆ.